ಮುಖಪುಟ
ಕೆಜಿಎಫ್ ನಂತರ ಯಶ್ ನಟಿಸುವ ಮುಂದಿನ‌ ಸಿನೆಮಾಕೆಜಿಎಫ್ ನಂತರ ಯಶ್ ನಟಿಸುವ ಮುಂದಿನ‌ ಸಿನೆಮಾ ಯಾವುದು ಗೊತ್ತಾ.?

ಕೆಜಿಎಫ್ ನಂತರ ಯಶ್ ನಟಿಸುವ ಮುಂದಿನ‌ ಸಿನೆಮಾಕೆಜಿಎಫ್ ನಂತರ ಯಶ್ ನಟಿಸುವ ಮುಂದಿನ‌ ಸಿನೆಮಾ ಯಾವುದು ಗೊತ್ತಾ.?

ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಕೆಜಿಎಫ್ 2 ಇನ್ನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ ಅನ್ನೋದು ಎಲ್ಲರಿಗೂ ಗೊತ್ತು. ಕೆಜಿಎಫ್ 2 ಯಾವ ರೀತಿಯಲ್ಲಿ ಕ್ರೇಜ್ ಸೃಷ್ಟಿಸಿದೆಯೋ ಅದೇ ರೀತಿಯಲ್ಲಿ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆ ಕೂಡಾ ಕ್ರೇಜ್ ಸೃಷ್ಟಿಸಿದೆ. ರಾಕಿ ಭಾಯ್ ಮುಂದಿನ ಸಿನಿಮಾ ಯಾವುದು, ಅದರ ಬಜೆಟ್ ಎಷ್ಟಿರಬಹುದು, ಯಾವಾಗ ರಿಲೀಸ್ ಆಗಬಹುದು, ಡೈರೆಕ್ಟರ್ ಯಾರು. ಈ ಎಲ್ಲಾ ಪ್ರಶ್ನೆ ಸಹಜವಾಗಿಯೇ ಬರುತ್ತದೆ.

ಯಶ್ ನಟಿಸುವ ಚಿತ್ರದ ನಿರ್ದೇಶಕ ಶಂಕರ್, ರಾಕಿ ಭಾಯ್ ಈಗ ಕನ್ನಡಕ್ಕೆ ಮಾತ್ರ ಸೀಮಿತ ಆಗಿಲ್ಲಸಂಪೂರ್ಣ ಭಾರತದ ಸ್ಟಾರ್ ಅವರು. ಈ ನಡುವೆ ತಮಿಳುನಾಡಿನಿಂದ ಸುದ್ದಿಯೊಂದು ಹೊರಬಿದ್ದಿದೆ. ತಮಿಳು ನಿರ್ದೇಶಕ ಶಂಕರ್ ಅವರ ಹೊಸ ಪ್ರಾಜೆಕ್ಟ್ ನಲ್ಲಿ ನಟಿಸಲು ಯಶ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಶಂಕರ್ ಹೊಸ ಸಿನಿಮಾದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದು, ಯಶ್ ಜೊತೆ ಈಗಾಗಲೇ ಮಾತಕತೆ ನಡೆಸಿದ್ದಾರೆ.

ಚೆನ್ನೈ ಮೂಲಗಳನ್ನು ನಂಬುವುದಾದರೆ, ಶಂಕರ್ ನಿರ್ದೇಶನದಲ್ಲಿ ಯಶ್ ನಟಿಸಲಿರುವ ಈ ಚಿತ್ರ ಅಂತಿಂಥಾ ಚಿತ್ರ ಅಲ್ಲ. ಅತ್ಯಂತ ದೊಡ್ಡ ಬಜೆಟ್ ನ್ನು ಈ ಚಿತ್ರಕ್ಕೆ ಯೋಚಿಸಲಾಗಿದೆ. ಆ ಬಜೆಟ್ ನ ಚಿತ್ರ ಇದುವರೆಗೆ ಭಾರತದ ಚಿತ್ರರಂಗದಲ್ಲೇ ನಿರ್ಮಾಣವಾಗಿಲ್ಲ ಎನ್ನಲಾಗಿದೆ. ಇದೊಂದು ಮಹಾಸಮರದ ಕಥೆ ಹೊಂದಿರುವ ಚಿತ್ರ. ಭಾರತೀಯ ಚಿತ್ರರಂಗದ ಅತಿರಥ ಮಹಾರಥರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.

ಈ ಸಂಬಂಧ ಮಾತುಕತೆಗಳು ನಡೆಯುತ್ತಿದ್ದು, ಉಳಿದ ನಟರ ಮಾಹಿತಿಗಳು ಹೊರಬಿದ್ದಿಲ್ಲ. 2022 ರಲ್ಲಿ ಈ ಮಹಾ ಸಿನೇಮಾ ಸೆಟ್ಟೇರಲಿದೆ. 2027ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಶಂಕರ್ ಈಗಾಗಲೇ ಸಿನಿಮಾದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದಾರೆ. ಜನಪ್ರಿಯ ನಟರ ಕಾಲ್ ಶೀಟ್ ಗಾಗಿ ಮಾತುಕತೆ ನಡೆಯುತ್ತಿದೆ. ಯಶ್ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ತೆಲುಗು ಹೀರೋ ರಾಮ್ ಚರಣ್ ಕೂಡಾ ಸಿನಿಮಾದಲ್ಲಿ ನಟಿಸಲಿದ್ದಾರೆ.

Leave a Reply

Your email address will not be published. Required fields are marked *

GoogleGuru by Trishul Media Network