ಮುಖಪುಟ
ತಂದೆ ಜೈಲಿನಲ್ಲಿ, ತಾಯಿ ಅನಾಥವಾಗಿ ಬಿಟ್ಟು ಹೋದಳು, ನಾಯಿ ಜೊತೆ ಫುಟ್‌ಪಾಥ್ ಮೇಲೆ ಮಲಗುವ ಈ ಬಾಲಕನ ಅದೃಷ್ಟ ಬದಲಾಗಿದ್ದು ಹೇಗೆ ಗೊತ್ತಾ.?

ತಂದೆ ಜೈಲಿನಲ್ಲಿ, ತಾಯಿ ಅನಾಥವಾಗಿ ಬಿಟ್ಟು ಹೋದಳು, ನಾಯಿ ಜೊತೆ ಫುಟ್‌ಪಾಥ್ ಮೇಲೆ ಮಲಗುವ ಈ ಬಾಲಕನ ಅದೃಷ್ಟ ಬದಲಾಗಿದ್ದು ಹೇಗೆ ಗೊತ್ತಾ.?

ಈ ಬಾಲಕನ ತಂದೆ ಜೈಲಿನಲ್ಲಿದ್ದಾರೆ, ತಾಯಿ ಆತನನ್ನು ಒಬ್ಬಂಟಿಯಾಗಿ ಬಿಟ್ಟಿದ್ದಾರೆ ಮತ್ತು ಅವನ ಹಳ್ಳಿಯ ಹೆಸರು ಏನೆಂದು ಅವನಿಗೆ ನೆನಪಿಲ್ಲ. ಇದು ಯಾವುದೇ ಚಿತ್ರದ ಕಥೆಯಲ್ಲ, ಆದರೆ ಒಂಬತ್ತು ವರ್ಷದ ಮನೆಯಿಲ್ಲದ ಮಗು ಅಂಕಿತ್‌ ಎಂಬ ಬಾಲಕನ ಜೀವನದ ಕಹಿ ವಾಸ್ತವವಾಗಿದೆ.

ಒಂಬತ್ತು ವರ್ಷದ ಅಂಕಿತ್ ಕಳೆದ ಕೆಲವು ವರ್ಷಗಳಿಂದ ಕಾಲುದಾರಿಯಲ್ಲಿ ವಾಸಿಸುತ್ತಿದ್ದು, ಚಹಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನ ಏಕೈಕ ಸ್ನೇಹಿತ ಎಂದರೆ ಅದು ದಾರಿತಪ್ಪಿದ ನಾಯಿ, ಆ ನಾಯಿಗೆ ಆತ ಪ್ರೀತಿಯಿಂದ ಡ್ಯಾನಿ ಎಂದು ಕರೆಯುತ್ತಾರೆ.

ಎರಡು ವಾರಗಳ ಹಿಂದೆ ಯಾರೋ ಅಂಕಿತ್ ಮತ್ತು ಡ್ಯಾನಿ ಅವರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅಂಕಿತ್ ತನ್ನ ‘ಸ್ನೇಹಿತ’ನೊಂದಿಗೆ ಅಂಗಡಿಯ ಹೊರಗೆ ಕಂಬಳಿಯಲ್ಲಿ ಮಲಗಿದ್ದನ್ನು ಕಾಣಬಹುದು. ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಥಳಿಯ ಜಿಲ್ಲಾಡಳಿತ ಬಾಲಕನನ್ನು ಹುಡುಕಲು ಪ್ರಾರಂಭಿಸಿತು.

ಅಂತಿಮವಾಗಿ ಎರಡು ದಿನಗಳ ಹಿಂದೆ ಆ ಬಾಲಕನ ಪತ್ತೆಹಚ್ಚಲಾಯಿತು ಮತ್ತು ಈಗ ಜಿಲ್ಲಾ ಪೊಲೀಸರು ಆತನ ಮೇಲ್ವಿಚಾರಣೆ ಮಾಡುತ್ತಿದೆ. ಮುಜಫರ್ ನಗರದ ಎಸ್‌ಪಿ ಅಭಿಷೇಕ್ ಯಾದವ್, “ಈಗ ಆ ಬಾಲಕನ ಬಗ್ಗೆ ಮುಜಫರ್ ನಗರ ಪೊಲೀಸರ ಮೇಲ್ವಿಚಾರಣೆ ಮಾಡುವಂತೆ ಹೇಳಿದ್ದಾರೆ. ನಾವು ಅವರ ಕುಟುಂಬವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಮತ್ತು ಅವರ ಚಿತ್ರವನ್ನು ಸುತ್ತಮುತ್ತಲಿನ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಈ ಕುರಿತಾಗಿ ಜಿಲ್ಲಾ ಅಧ್ಯಕ್ಷರು ಮಕ್ಕಳ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಎಚ್ಚರಿಕೆ ನೀಡಿದ್ದಾರೆ. ಕೊಟ್ವಾಲಿ ನಗರದ ಎಸ್‌ಎಚ್‌ಒ ಅನಿಲ್ ಕಪರ್ವಾನ್ ಮಾತನಾಡಿ, ಅಂಕಿತ್ ಸ್ಥಳೀಯ ಮಹಿಳೆ ಶೀಲಾ ದೇವಿ ಅವರೊಂದಿಗೆ ಇದ್ದಾರೆ, ಅವರನ್ನು ಅಂಕಿತ್ ಗುರುತಿಸಬಲ್ಲ ಎಂದರು. ಅಂಕಿತ್ ಅವರ ಕುಟುಂಬವು ಕಂಡುಬರುವವರೆಗೂ ಅವರು ಖಾಸಗಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಾರೆ. ಪೊಲೀಸರು ಶಾಲಾ ಆಡಳಿತ ಮಂಡಳಿಯನ್ನು ಕೋರಿದ ನಂತರ, ಶಾಲೆ ಅವರಿಗೆ ಉಚಿತ ಶಿಕ್ಷಣ ನೀಡಲು ಒಪ್ಪಿದೆ.

ಅಂಕಿತ್ ಕೆಲಸ ಮಾಡುತ್ತಿದ್ದ ಚಹಾ ಅಂಗಡಿಯ ಮಾಲೀಕರು ಡ್ಯಾನಿ ನಾಯಿ ತನ್ನ ಸ್ಥಳದಿಂದ ಎಂದಿಗೂ ಕದಲುತ್ತಿಲ್ಲ ಆ ನಾಯಿ ಅಂಕಿತ್‌ಗಾಗಿ ಕಾಯುತ್ತಿದೆ ಎಂದು ಹೇಳಿದರು. “ಹುಡುಗ ಇಲ್ಲಿ ಕೆಲಸ ಮಾಡುವವರೆಗೂ, ನಾಯಿ ಒಂದು ಮೂಲೆಯಲ್ಲಿ ಕುಳಿತುಕೊಳ್ಳುತ್ತಿತ್ತು, ಅಂಕಿತ್ ಕೆಲಸ ಮುಹಿದ ನಂತರ ಆ ನಾಯಿ ಅಂಕಿತ್ ಜೊತೆ ಓಡಾಡುತ್ತಿತ್ತು ಎಂದರು.

ಇದಲ್ಲದೆ ಅಂಕಿತ್ ತುಂಬಾ ಸ್ವಾಭಿಮಾನಿಯಾಗಿದ್ದಾನೆ ಆತ ಎಂದಿಗೂ ನಾವು ಏನೆ‌ ವಸ್ತು ಉಚಿತವಾಗಿ ಕೊಟ್ಟರು ತೆಗೆದುಕೊಳ್ಳುತ್ತಿರಲಿಲ್ಲ, ತನ್ನ ನಾಯಿಗೆ ಹಾಲು ಕೂಡ ದುಡಿದು ಹಾಕುತ್ತಿದ್ದ ಎಂದು ಅಂಕಿತ್ ಕೆಲಸ ಮಾಡುವ ಹೋಟೆಲ್ ಮಾಲಿಕರು ಹೇಳಿದ್ದಾರೆ.

Leave a Reply

Your email address will not be published. Required fields are marked *

GoogleGuru by Trishul Media Network